Advertisment

ರಾಮ್ ಚರಣ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಹುಟ್ಟುಹಬ್ಬದ ದಿನವೇ ಗಿಫ್ಟ್ ಕೊಟ್ಟ ಗೇಮ್‌ ಚೇಂಜರ್‌; ಏನದು?

author-image
Veena Gangani
Updated On
ರಾಮ್ ಚರಣ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಹುಟ್ಟುಹಬ್ಬದ ದಿನವೇ ಗಿಫ್ಟ್ ಕೊಟ್ಟ ಗೇಮ್‌ ಚೇಂಜರ್‌; ಏನದು?
Advertisment
  • ಹುಟ್ಟುಹಬ್ಬದ ಸಂಭ್ರಮದಲ್ಲಿ RRR ಖ್ಯಾತ ನಟ ರಾಮ್ ಚರಣ್ ದಂಪತಿ
  • ಹುಟ್ಟು ಹಬ್ಬದ ದಿನದಂದೇ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟ ನಟ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಈ ವಿಡಿಯೋ

ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್‌, ಆರ್​ಆರ್​ಆರ್ ಸಿನಿಮಾ ಖ್ಯಾತಿಯ​ ನಟ ರಾಮ್ ಚರಣ್​​ 39ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು 39ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ರಾಮ್ ಚರಣ್ ದಂಪತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಮ್‌ ಚರಣ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೂಡ ಸಿಕ್ಕಿದೆ.

Advertisment

ನಟ ರಾಮ್​ ಚರಣ್​ ಹಾಗೂ ಅವರ ಪತ್ನಿ ಉಪಾಸನಾ ಜೊತೆಗೆ ತಿರುಪತಿಗೆ ಭೇಟಿ ನೀಡಿದ್ದಾರೆ. ರಾಮ್ ಚರಣ್ ದಂಪತಿ ಮೊದಲ ಬಾರಿಗೆ ಮುದ್ದಾದ ಮಗಳು ಕ್ಲೀಂಕಾರಳನ್ನು ಕೂಡ ಕರೆದುಕೊಂಡು ಬಂದಿದ್ದಾರೆ. ರಾಮ್​ ಚರಣ್​ ಹಾಗೂ ಉಪಾಸನಾ ತಿರುಪತಿಗೆ ಹೋಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.


">March 27, 2024

ಇದನ್ನೂ ಓದಿ: RRR ಹೀರೋ ರಾಮ್ ಚರಣ್ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ.. ನಾನು ರೆಡಿ ಎಂದ ಉಪಾಸನಾ! ​

Advertisment

ಹುಟ್ಟುಹಬ್ಬದ ಸ್ಪೆಷಲ್ ದಿನದಂದೇ ರಾಮ್ ಚರಣ್ ಅಭಿಮಾನಿಗಳಿಗೆ ಗಿಫ್ಟ್ ಕೊಡಲಾಗಿದೆ. ರಾಮ್ ಚರಣ್‌ ನಟನೆಯ ಗೇಮ್ ಚೇಂಜರ್ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಜರಗಂಡಿ ಎಂಬ ಶೀರ್ಷಿಕೆಯಲ್ಲಿ ಈ ಸಾಂಗ್​ ಮೂಡಿ ಬಂದಿದೆ. ಜರಗಂಡಿ ಹಾಡನ್ನು ಸಂಗೀತ ನಿರ್ದೇಶಕ ಥಮನ್ ಎಸ್ ರಚಿಸಿದ್ದಾರೆ. ಈ ಹಾಡನ್ನು ಪಂಜಾಬಿ ಪಾಪ್ ಗಾಯಕ ದಲೇರ್ ಮೆಹಂದಿ ಮತ್ತು ಸುನಿಧಿ ಚೌಹಾನ್ ಹಾಡಿದ್ದಾರೆ. ಇದೀಗ ಈ ಸಾಂಗ್​ ಬಿಡುಗಡೆ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ರಾಮ್ ಚರಣ್ ತೇಜ ಅವರು RRR ಸಿನಿಮಾದಲ್ಲಿ ನಟಿಸಿದ್ದರು. ಅದಾದ ಬಳಿಕ ಅವರು ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್‌ಗೆ ಹೀರೋಯಿನ್ ಆಗಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment